Friday, August 16, 2013

ಹಬ್ಬಗಳ ಬಗ್ಗೆ!!

ಶ್ರಾವಣಮಾಸ ಶುರುವಾಗುವುದೇ ಸರಿ, ನಮ್ಮ ಹಬ್ಬ ಹರಿದಿನಗಳು ಸಾಲು ಸಾಲಾಗಿ ಬಂದು ನಿಲ್ಲುತ್ತವೆ ನಮ್ಮ ಮುಂದೆ. ನಾಗರ ಚವಿತಿ, ಪಂಚಮಿ ಅಂತ ಅಗ್ಲೆ ಹಬ್ಬಗಳ ಅರೆಂಗೆಟನಂ ಅಗಿದ್ರು ನಮ್ಮ ಮನೆಲಿ ವರಮಹಾಲಕ್ಷ್ಮಿ ಹಬ್ಬವೇ ಆರಂಭದ ಸಂಕೇತ.

ಹಬ್ಬ ಹರಿದಿನಗಳ ಸಡಗರ ಸಂಭ್ರಮಗಳ, ಹಿನ್ನಲೆ ಅವುಗಳ ಅವಶ್ಯಕತೆಗಳ ಬಗ್ಗೆ ಇಷ್ಟ ಹಾಗು ಒಲ್ಲೆ ಅಭಿಪ್ರಯಗಳಿದ್ದರು, ಪೂಜೆ ಅದೂ ವಿಗ್ರಹಗಳ ಪೂಜೆ ಬಗ್ಗೆ ಒಪ್ಪಲಾರದ ವಿರೋಧ.

ಅಮ್ಮ ಮನೇಲಿ ಬಹಳ ವಿಜೃಂಬಣೆ ಹಾಗೂ ಶುದ್ದ ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ಮಾಡುವರು. ಅದರಲ್ಲು ಈ ಲಕ್ಷ್ಮಿ ಹಬ್ಬವನ್ನು ಇನ್ನು ಅದ್ಭುತವಾಗಿ ಮಾಡುತ್ತಾರೆ. ಈ ಸಲದ ಹಬ್ಬ ನಡೆಯುವ ವೇಳೆಲಿ ಒಂದು ಅನುಮಾನ ಹುಟ್ಟಿ ಈ ಬರಹಕ್ಕೆ ಕರಣವಾಗಿದೆ. ಎಲ್ಲರ ಮನೆಗಳಲ್ಲು ಹಬ್ಬಗಳನ್ನ ಆಚರಿಸುತ್ತರೆ ಆದರೆ ಅದನ್ನು ಒಂದು ಪದ್ದತಿಯೆಂದಷ್ಟೇ ಅನುಸರಿಸುತಿದ್ದರೇಯೆ ಹೊರತು ಅದರ ಅವಶ್ಯಕತೆ ಅಥವ ಅದರ ಹಿನ್ನಲೆಗಳ ಬಗ್ಗೆ ಕಿಂಚಿತ್ತು ಗಮನ ಹರಿಸುತಿಲ್ಲ. ಇದೇ ಕರಣದಿಂದಾಗಿ ನಮ್ಮ್ ಈಗಿನ ಪೀಳಿಗೆಗೆ ಅದೊಂದು ಗೊಡ್ಡು ಅಚರಣೆ ಆಗಿ ಕಣುತಿದೆ. ಈ ಪರಿಸ್ತಿತಿ ನಮ್ಮ ಮನೇಲು ಬಿನ್ನವಾಗಿಲ್ಲ. ಪ್ರತಿಯೊಂದನ್ನು ಪ್ರಶ್ನಿಸಿ ಅಭ್ಯಾಸವಿರುವ ಈ ನಮ್ಮ ಹೊಸ ತಲೆಮಾರಿಗೆ ಉತ್ತರಗಳನ್ನೆ ನೀಡದೆ, ನಮ್ಮ ಅಚರಣೆಗಳ ಬಗ್ಗೆ ಅಸಡ್ಡೆ ಬರುವ ಹಾಗೆ ಮಾಡುತಿದ್ದೆವೇ ಅನಿಸುತ್ತೆ!!

ಅದೇ ಮಧ್ಯನ, ಒಂದು ಚನ್ನೆಲ್ ನಲ್ಲಿ ಈ ಹಬ್ಬದ ಬಗೆಗಿನ ಹಿನ್ನಲೆ, ಅದರ ಆಚರಣೆಯ ಪ್ರಕಾರಗಳ ಬಗ್ಗೆ ಒಳ್ಳೆ ಕರ್ಯಕ್ರಮ ಪ್ರಸಾರವಯಿತು. ವೇದಾಭ್ಯಸ ಮಾಡಿದ ಆ ವ್ಯಕ್ತಿ ಹೇಳಿದ ಮೇಲೆ ಈ ಅಚರಣೆಗಳ ಅರ್ಥ ತಿಳಿತು. 
ಅದೇನೆಂದರೆ, ಮಳೆಗಾಲ ಶುರುವಾಗಿರುವ ವರುಷದ ಈ ಹಂತದಲ್ಲಿ ಎಲ್ಲೆಡೆಯು ನೀರು ತುಂಬಿ ಭುತಾಯಿಯು ಕಂಗೊಳಿಸುತ್ತಿರುವ ಸಂಧರ್ಭದಲ್ಲಿ, ಆ ಕೆಸರಿನಿಂದ ಜನಿಸಿದ ಅಂತ ಹೇಳುವ ಲಕ್ಷ್ಮಿಯ ಪೂಜೆ ಸಂದರ್ಭೊಚಿತ. ಅದರಿಂದಲೆ ಆ ಲಕ್ಷ್ಮಿಯ ಅಷ್ಟೋತರದ ಶುರುವಿನಲ್ಲೆ "ಪ್ರಕೃತಾಯೇ ನಮಹೊ" ಎಂದು ಹೇಳುವುದು. ಅದೇ ರೀತಿ ಈ ವ್ರತದ ಮೂಲ ಅಚರಣೆಯನ್ನು ನಮ್ಮ ವೇದಗಳ ಪ್ರಕಾರ ಹೇಳುವುದದರೆ, ನಮ್ಮ ಜೀವನಾಡಿಯಾದ ನೀರನ್ನು ಒಂದು ಪಾತ್ರೆ ಅಥವ ಚೊಂಬಿನಲ್ಲಿಟ್ಟು, ಆ ಪಾತ್ರೆಯನ್ನು ಅಕ್ಕಿಯ ("ಅನ್ನ ಬ್ರಹ್ಮ" ಎನ್ನುವ ನಾವು ) ಮೇಲಿಟ್ಟು, ಅವುಗಳನ್ನು ಪೂಜಿಸುವುದೇ ಈ ವ್ರತ. ವೇದಗ ನಂತರದ ದಿನಗಳಲ್ಲಿ ಮೂರ್ತಿ ಪುಜೆಗಳು ಶುರುವಾಗಿ, ಅದರ ನಂತರ ಪುರಣಗಳಲ್ಲಿ "ಚಾರುಮತಿ" ಕಥೆಯಾಗಿ, ನಮ್ಮ ಮೂಲ ಪುಜಾ ವಿಧನ ಇಂದಿನ ದಿನದ ಭವ್ಯ ಹಾಗು ವೈಭವಗಳ, ವಿವಿಧ ಪುಜಾ ವಿಧಾನಗಳ ಆಚರಣೆಗಳಲ್ಲಿ ಕಾಣದಾಗಿದೆ. ಮೂಲತಃ ಪ್ರಕೃತಿಯ ಆರಾಧನೆ ಆಗಬೇಕಿದ್ದ ಈ ಹಬ್ಬಗಳು, ಅರ್ಥ ಬಯಸದ ಜನರ ಅನುಕರಣೆಯಿಂದ ಅದರ ಮೂಲ ಉದ್ದೇಶಕ್ಕೆ ತಿಲಾಂಜನ ಹೇಳ ಹೊರಟಿದ್ದಾರೆ. 

ತಿಳಿದ ಕೆಲವು ವಿಷಯಗಳ ಹಂಚಿಕೊಳ್ಳುವ ಉದ್ದೇಶದಿಂದ......

Saturday, July 20, 2013

ಮೊದಲ ಮಾತು

ನಿಜಕ್ಕೂ ಒಂಟಿತನ ಒಂದು ಅದ್ಭುತ ಅನುಭವ, ಅದಕಿಂತಲೂ ಅದು ಕಲಿಸುವ ಪಾಠ ಅವಿಸ್ಮರಣೀಯ.
ಅದೊಂದು ಪವರ್ ಕಟ್ ಆದ ರಾತ್ರಿ, ಕತ್ತಲೆಯೇ ಮೇಲುಗೈ ಆದ ಹೊತ್ತು, ಹೊತ್ತಿಸಿದ ಮೇಣದ ಬತ್ತಿಯ ತುದಿ ಇರುಳ ತಂಗಾಳಿಯಲಿ ತೂರಾಡುತಿರಲು, ಮನಸಲಿ ಚಿಂತನೆಗಳ ಪ್ರವಾಹ ಮೂಡಿ, ಕಟ್ಟೆ ಹೊಡೆದಾಗ ಹೊರಬಂದ ಚಿತ್ತಾರವೇ ಈ ಪದ ಪುಂಜಗಳ ಹಾರ. 

ವಿಶಾಲವಾದ ಸಾಗರದ ತೀರದಲ್ಲಿ ನಿಂತು ಅನಂತದೆಡೆಗೆ ನೋಡುವಾಗಲೋ ಅಥವ ಆದಿ ಅಂತ್ಯವಿಲ್ಲದ ಆ ಅಗಣಿತ ತಾರೆಗಳ ಮುಡಿದ ಇರುಳ ನಭದೆಡೆಗೆ ನೋಡುವಾಗಲೋ, ಮೂಡುವ ಆ ಅಲೌಕಿಕ ಭಾವನೆ, ಈ ಮೇಣದಬತ್ತಿ ಬೆಳಗಿದ ಇರುಳ ಸಮಯ ಮೂಡಿಸುತ್ತಿದೆ.

ಆಗಷ್ಟೇ ಮಳೆ ನಿಂತು, ಮಿಂದೆದ್ದಿದ ಆ ನೆಲವ ಸೋಕಿ ತೂರಿ ಬರುತಿದ್ದ ತಂಗಾಳಿಯಲಿ, ಒಂಟಿಯಾಗಿ ಕುಳಿತಿರಲು, ಪವರ್ ಕಟ್ ಮೂಡಿಸಿದ ಈ ಸನ್ನಿವೇಶ ನನ್ನ ಎಷ್ಟೋ ದಿನಗಳ ಆಸೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರೇರೇಪಿಸಿದಂತಿತ್ತು.
ಗಾಳಿಯಲ್ಲಿ ತೂರಾಡುತಿದ್ದ ಆ ಮೇಡದ ಜ್ವಾಲೆಯು ನನ್ನ ಮನದಲ್ಲಿ ಮೂಡುತಿದ್ದ ಎಗ್ಗಿಲ್ಲದ ಯೋಚನೆಗಳ ಕನ್ನಡಿಯಂತೆ ಕಂಡು, ಅವುಗಳ ಸೆರೆಹಿಡಿಯಲು ಮನಸ್ಸು ಮಾಡಿದ ಪ್ರಯತ್ನವೇ, ಈ ನನ್ನ ಹೊಸ ಬ್ಲಾಗಿನ ಆರಂಭ.

ಮೂಡುವ ಅದೆಷ್ಟೋ ಆಲೋಚನೆ, ವಿಶ್ಲೇಷಣೆಗಳ ಕೂಡಿಕರಿಸ ಬೇಕೆಂಬ ನನ್ನ ಬಯಕೆಯ ಈಡೇರಿಸಿಕೊಳ್ಳುವ ಪ್ರಯತ್ನ ಇದು!!